ಆರೋಗ್ಯ ಉಪಕೇಂದ್ರಗಳಿಗೆ ಗ್ರಹಣ

   

ಪಾವಗಡ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಉಪ ಕೇಂದ್ರಗಳ ನ್ನು ಸರ್ಕಾರ ನಿರ್ಮಾಣ ಮಾಡಿದೆ, ಆದರೆ ಅಲ್ಲಿ ಯಾವುದೇ ರೀತಿಯ ವೈದ್ಯಕೀಯ ಚಟುವಟಿಕೆಗಳಿಲ್ಲದೇ ನಿರುಪಯುಕ್ತ ಘಟಕಗಳಾಗಿ ನಿಂತಿವೆ.
ಈ ಆರೋಗ್ಯ ಉಪಕೇಂದ್ರಗಳ ನಿರ್ಮಾಣಕ್ಕೆ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿವೆ, ಅದರೆ ಅವುಗಳು ಸೇವಾರ್ಪಣೆಯಾಗದೆ  ಗ್ರಹಣ ಹಿಡಿದಿವೆ, ತಾಲ್ಲೂಕಿನ ಬ್ಯಾಡನೂರು, ಪೋತಗಾನಹಳ್ಳಿ, ಕನ್ನಮೇಡಿ, ಗುಂಡಾರ್ಲಹಳ್ಳಿ, ಶೈಲಾಪುರ, ಕೋಡಿಗೆಹಳ್ಳಿ, ಕಡಪಲಕೆರೆ, ದೊಮ್ಮತಮರಿ, ಮರಿದಾಸನಹಳ್ಳಿ, ಹೀಗೆ ಹಲವು ಹಳ್ಳಿಗಳಲ್ಲಿ ಆರೋಗ್ಯ ಉಪ ಕೇಂದ್ರಗಳು ನಿರ್ಮಾಣಗೊಂಡಿದ್ದು ಅಲ್ಲಿ ಯಾವುದೇ ವೈದ್ಯಕೀಯ ಚಟುವಟಿಕೆಗಳು ಕಾಣಸಿಗುತ್ತಿಲ್ಲ, ಆರೋಗ್ಯ ಕೇಂದ್ರಗಳು ಇದ್ದು ಇಲ್ಲದಂತಾಗಿವೆ, ಕನ್ನಮೇಡಿ, ಗುಂಡಾರ್ಲಹಳ್ಳಿಯಲ್ಲಿ ನಿರ್ಮಾಣಗೊಂಡು ವರ್ಷಗಳೆ ಕಳೆದರೂ ಇದುವರೆಗೂ ಅಲ್ಲಿ ವೈದ್ಯಕೀಯ ಸೇವೆ ಸಿಗದೇ ಬೀಗ ಜಡಿಯಲಾಗಿದೆ, 
ಕರೋನಾ 2 ನೇ ಅಲೆ ಅಬ್ಬರ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇಂತಹ ಸಂದಿಗ್ದ ಸ್ಥಿತಿಯಲ್ಲಿ ಆರೋಗ್ಯ ಸೇವೆ ಅನಿವಾರ್ಯವಾಗಿದೆ, ಈ ಆರೋಗ್ಯ ಉಪಕೇಂದ್ರಗಳು ಇಂತಹ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿದರೆ ಹಳ್ಳಿಗರಿಗೆ ಹೆಚ್ಚು ಅನುಕೂಲವಾಗುತ್ತದೆ, ಈ ಆರೋಗ್ಯ ಉಪಕೇಂದ್ರಗಳಿಗೆ ಸಿಬ್ಬಂದಿ ನೇಮಿಸಿ ಪುನರಾರಂಭಿಸಿದರೆ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವುದಲ್ಲದೇ ತಾಲ್ಲೂಕು ಕೇಂದ್ರಗಳಿಗೆ ಅಲೆದಾಟ ತಪ್ಪುತ್ತದೆ, ನಕಲಿ ವೈದ್ಯರ ಹಾವಳಿಯೂ ತಡೆಗಟ್ಟಲು ಸಹಾಯಕವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ, 
ಇನ್ನಾದರೂ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು ಹಾಗೂ ಶಾಸಕರು ಇದರ ಬಗ್ಗೆ ಗಮನ ಹರಿಸಿ ಹಳ್ಳಿಗರ ಆರೋಗ್ಯ ಸೇವೆಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮೀಣ ಭಾಗದ ಜನರ ಅಹವಾಲಾಗಿದೆ 
ವರದಿ: ಪೆಮ್ಮನಹಳ್ಳಿ ಶ್ರೀನಾಥ್, ಪಾವಗಡ