ಕಲಾವಿದರಿಗೆ ಆಹಾರ ಕಿಟ್ ವಿತರಣೆ.

ಕಲಾವಿದರಿಗೆ ಆಹಾರ ಕಿಟ್ ವಿತರಣೆ.
ಕಲಾವಿದರಿಗೆ ಆಹಾರ ಕಿಟ್ ವಿತರಣೆ.
   

ಚಾಮರಾಜನಗರ : ಚಾಮರಾಜನಗರದಲ್ಲಿ ಕಲಾವಿದರ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.ಚಾಮರಾಜನಗರದಲ್ಲಿ ಗಾನ ಗಂಧರ್ವ ಕಲಾ ಬಳಗ ಮೈಸೂರು ಹಾಗು ಚಾಮರಾಜೇಶ್ವರ ಕಲಾವಿದರ ಸಂಘ ಚಾ.ನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕೋವಿಡ್ 2ನೇ ಅಲೆ ಯಿಂದ ಲಾಕ್ ಡೌನ್ ನಿಂದ  ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ದೊರೆತಿಲ್ಲ.
ಕೃಷಿ ಸಚಿವ ಬಿ.ಸಿ.ಪಟೇಲ್ ಹಾಗು ವಿ.ಮನೋಹರ್ ರವರ ಆಶ್ರಯದಲ್ಲಿ ಚಾಮರಾಜನಗರದ ಪ್ರಮುಖ ಕಲಾವಿದರಿಗೆ ಆಹಾರ ಕಿಟ್ ಗಳನ್ನು ನೀಡಲಾಯಿತು.ಜಿಲ್ಲೆಯಲ್ಲಿ ಕಲೆಯನ್ನೇ ನಂಬಿಕೊಂಡಿರುವ ಜಾನಪದ, ಸುಗಮ ಸಂಗೀತ, ಕಲಾವಿದರ ಜೀವನವನ್ನು ನಡೆಸಲು ಅನುಕೂಲ ವಾಗುವಂತೆ ರಾಜ್ಯ ಸರ್ಕಾರ ಅನೇಕ ಸೌಲಭ್ಯ ಗಳನ್ನು ನೀಡಬೇಕಾಗಿ ಮಾಡು ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿಯನ್ನು ಮಾಡಲಾಯಿತು.

ವರದಿ. ಅನಿಲ್ ಕುಮಾರ್. ಗೂಳಿಪುರ