ಜಿಲ್ಲಾ ಪಂಚಾಯಿತಿ ಸಿ.ಇ.ಓ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ತನಿಖೆ ನಡೆಸಿ ಎಂದು ಕದಂಬ ಸೇನೆ ಒತ್ತಾಯ.

ಜಿಲ್ಲಾ ಪಂಚಾಯಿತಿ ಸಿ.ಇ.ಓ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ತನಿಖೆ ನಡೆಸಿ  ಎಂದು ಕದಂಬ ಸೇನೆ ಒತ್ತಾಯ.
ಜಿಲ್ಲಾ ಪಂಚಾಯಿತಿ ಸಿ.ಇ.ಓ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ತನಿಖೆ ನಡೆಸಿ  ಎಂದು ಕದಂಬ ಸೇನೆ ಒತ್ತಾಯ.
   
ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣರಾವ್‌ ಹಾಗೂ ಲೆಕ್ಕಾಧಿಕಾರಿ ಮಿಲನ್‌ ಅವರು ಸೇರಿಕೊಂಡು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಕದಂಬ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಅಂಬರೀಷ್‌ ಅವರು ಒತ್ತಾಯಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೋವಿಡ್‌ ಕಾರಣದಿಂದ ಅನಿವಾರ್ಯ ಹಾಗೂ ಅವಶ್ಯಕ ಸಂದರ್ಭಗಳಲ್ಲಿ ಮಾತ್ರ ಹಣ ಖರ್ಚು ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹಾಗಿದ್ದರೂ ಜಿಲ್ಲಾ ಪಂಚಾಯಿತಿ ಸಿಇಒ ಅವರುತಮ್ಮ ಸರ್ಕಾರಿ ನಿವಾಸಕ್ಕೆ ಎಸಿ, ಬೆಡ್‌ಶೀಟ್‌, ಬ್ಲಾಂಕೆಟ್‌, ಟವೆಲ್‌  ಇತ್ಯಾದಿಗಳ ಹೆಸರಿನಲ್ಲಿ ₹3.16 ಲಕ್ಷ ಖರ್ಚು ಮಾಡಿದ್ದಾರೆ. ಪೀಠೋಪಕರಣ ಖರೀದಿಗಾಗಿ ₹98,950 ಬಳಸಲಾಗಿದೆ. ಕರ್ನಾಟಕ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯು ಕಳೆದ ವರ್ಷ ಜಿಲ್ಲಾ ಪ್ರವಾಸಕ್ಕೆ ಬಂದಾಗ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ವಾಸ್ತವ್ಯಕ್ಕಾಗಿ ₹59,745 ಹಾಗೂ ಈ ವರ್ಷದ ಫೆಬ್ರುವರಿಯಲ್ಲಿ ಭೇಟಿ ನೀಡಿದ್ದಾಗ ₹87 ಸಾವಿರ ಹಣವನ್ನು ಜಿಲ್ಲಾ ಪಂಚಾಯಿತಿಯಿಂದ ವೆಚ್ಚ ಮಾಡಾಗಿದೆ’ ಎಂದು ಆರೋಪಿಸಿದರು. ಎಲ್ಲವನ್ನೂ ನಿಯಮ ಉಲ್ಲಂಘಿಸಿ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಲಿಂಗರಾಜು ಶಂಕರಪುರ ಇದ್ದರು.

ವರದಿ. ಅನಿಲ್ ಕುಮಾರ್. ಗೂಳಿಪುರ