ಸಂಕಷ್ಟದಲ್ಲಿದ್ದ ಅರ್ಚಕರ ನೆರವಿಗೆ ಸಮಗ್ರ ಸೇವಾಭಿವೃದ್ದಿ ಟ್ರಸ್ಟ್‌ ನೆರವು

   

ಪಾವಗಡ: ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗುವುದೇ ನಮ್ಮ ಸೇವಾ ಸಂಸ್ಥೆಯ ಮಹತ್ತರ ಉದ್ದೇಶ ಎಂದು ಪಾವಗಡ ತಾಲ್ಲೂಕು ಸಮಗ್ರ ಸೇವಾ ಟ್ರಸ್ಟ್ ನ  ಅಧ್ಯಕ್ಷ ಬಿ.ಕೆ.ಮುನಿಸ್ವಾಮಿ ತಿಳಿಸಿದರು 
ಪಟ್ಟಣದಲ್ಲಿ ಭಾನುವಾರ ಸಾಯಿಬಾಬ ಮಂದಿರದ ಅವರಣದಲ್ಲಿ ಪಾವಗಡ ತಾಲ್ಲೂಕು ವೈಷ್ಣವ ಜನಾಂಗದ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು ಕೋವಿಡ್  2 ನೇ ಅಲೆಯ ಅವಾಂತರದಿಂದಾಗಿ ತಾಲ್ಲೂಕಿನ ಜನತೆ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಇಂತವರ ಸೇವೆಗೆ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಸುತ್ತಿರುವ  ಎಸ್.ಆರ್. ರಾಘವೇಂದ್ರ ಸರ್ ಅವರು ಪಾವಗಡ ಜನರ ಕಷ್ಟಗಳಿಗೆ ಹಲವು ವರ್ಷಗಳಿಂದ ಸಹಾಯ ಹಸ್ತ ಚಾಚಿ ಅವರ ನೆರವಿಗೆ ದಾವಿಸುತ್ತಿದ್ದಾರೆ, ಅವರ ಸೇವೆ ಶ್ಲಾಘನೀಯ, ಪ್ರಸ್ತುತ ಅವರ ನೇತೃತ್ವದಲ್ಲಿ ಈಗ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಪುಡ್ ಕಿಟ್ ವಿತರಣೆ ಮಾಡಲಾಗುತ್ತಿದೆ, ತಾಲ್ಲೂಕಿನ ಜನರ ಪರವಾಗಿ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು 
ಸಂಸ್ಥೆಯ ಮುಖ್ಯಸ್ಥರಾದ ಶಶಾಂಕ್ ಮಾತನಾಡಿ ಅರ್ಚಕರು ದೇವರ ಸೇವೆಯಲ್ಲಿ ಸದಾ ನಿರತರಾಗಿರುತ್ತಾರೆ ಅದನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ ಕೊರೊನಾ ಮಹಾಮ್ಮಾರಿ ಅರ್ಚಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ, ಇಂತವರ ನೆರವಿಗೆ ಧಾವಿಸುವುದು ನಮ್ಮ ಸಂಸ್ಥೆಯ ಪುಣ್ಯ , ಇಂತಹ ಮಹತ್ ಕಾರ್ಯಕ್ಕೆ ರಾಘವೇಂದ್ರ ಸರ್ ಅವರ ನೇತೃತ್ವ ಇದೆ, ಅವರ ಮಾರ್ಗದರ್ಶನದಲ್ಲಿ ಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೆವೆ ಎಂದು ತಿಳಿಸಿದರು 
ಇದೇ ಸಂದರ್ಭದಲ್ಲಿ ಶ್ರಮಿಕ ವರ್ಗದ ಹಲವು ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು 
ಕಾರ್ಯಕ್ರಮದಲ್ಲಿ ವೈಷ್ಣವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ನ ಮುಖ್ಯಸ್ಥರು, ನಿರ್ದೇಶಕ ರುಗಳು, ಇತರ ಮುಖಂಡರು ಹಾಜರಿದ್ದರು
ವರದಿ: ಪೆಮ್ಮನಹಳ್ಳಿ ಶ್ರೀನಾಥ್, ಪಾವಗಡ