ಸಂಕಷ್ಟದಲ್ಲಿ ನೆರವಾಗಲು ಬಂದವರಿಗೆ ರಾಜಕೀಯ ಶಕ್ತಿಗಳಿಂದ ಸೇವೆಗೆ ಅಡ್ಡಿ ಪಾವಗಡ ಸಮಗ್ರ ಸೇವಾಭಿವೃದ್ದಿ ಸಂಸ್ಥೆಯ ಅಧ್ಯಕ್ಷರ ಆರೋಪ

   

ಪಾವಗಡ : ಕರೊನಾ ವೈರಸ್ ನ್ನು ಮಟ್ಟ ಹಾಕಲು ತಾಲ್ಲೂಕಿನಾದ್ಯಂತ ಡ್ರೋನ್ ಹಾಗೂ ಬ್ರ್ರೋಯರ್   ಮೂಲಕ ಸ್ಯಾನಿಟೈಸ್ ಮಾಡುತ್ತಿದ್ದ ಎಸ್.ಆರ್. ರಾಘವೇಂದ್ರ ಸರ್ ನೇತೃತ್ವದ ಸಮಗ್ರ ಸೇವಾಭಿವೃದ್ದಿ ಸಂಸ್ಥೆಯ ಕಾರ್ಯಕ್ಕೆ ಕಾಣದ ಕೈಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸೇವಾಕಾರ್ಯಕ್ಕೆ ತಡೆಯೊಡ್ಡಿದ್ದಾರೆ ಎಂದು ಸಂಸ್ಥೆ ಯ ಅಧ್ಯಕ್ಷ ಬಿ.ಕೆ ಮುನಿಸ್ವಾಮಿ ಆರೋಪಿಸಿದ್ದಾರೆ 

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ರಾಘವೇಂದ್ರ ಸರ್ ನೇತೃತ್ವದಲ್ಲಿ ಪಾವಗಡ ಜನತೆಯ ಸಂಕಷ್ಟಕ್ಕೆ ನೆರವಾಗಿ ಸಂಸ್ಥೆ ಆನೇಕ ಸಮಾಜಮುಖಿ ಕಾಯ೯ಗಳನ್ನು ಮುನ್ನೇಡಿಸಿಕೊಂಡು ಸೇವೆ ಸಲ್ಲಿಸುತ್ತಿದ್ದೇವೆ, ಪ್ರಸ್ತುತ ಕೊವಿಡ್ 2 ನೇ ಅಲೆಯಿಂದಾಗಿ ತಾಲ್ಲೂಕಿನ ಜನತೆ ಹಲವು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ, ಇಂತಹ ಸಂದರ್ಭದಲ್ಲಿ ಸಂಸ್ಥೆ ಮಾನವೀಯ ನೆಲೆಗಟ್ಟಿನಲ್ಲಿ ಹಲವು ರೀತಿಯ ಸೇವಾಕಾರ್ಯಗಳನ್ನು ಮಾಡುತ್ತಿದೆ, ಅದರ ಒಂದು ಭಾಗವಾಗಿ ಡ್ರೋನ್ ಮೂಲಕ ತಂತ್ರಜ್ಞಾನ ಉಪಯೋಗಿಸಿ ವೈರಸ್ ನಿರ್ಮೂಲನೆ ಗೆ ಸ್ಯಾನಿಟೈಸ್ ಮಾಡುತ್ತಿದ್ದೇವು , ಇದಕ್ಕೆ ತಾಲ್ಲೂಕು ಆಡಳಿತವು ಒಪ್ಪಿಗೆ ಸೂಚಿಸಿತ್ತು , ಆದರೆ ಹಠಾತ್‌ ಆಗಿ ಸಿಂಪಡಣೆ ಕಾರ್ಯವನ್ನು ರದ್ದುಪಡಿಸಲು  ಉಪವಿಭಾಗಾಧಿಕಾರಗಳು (ಎ.ಸಿ) ನಮಗೆ ಸೂಚಿಸಿರುತ್ತಾರೆ , ಕಾಣದ ಕೈಗಳ ಒತ್ತಡ ದಿಂದಾಗಿ ನಮ್ಮ ಸೇವಾ ಕಾರ್ಯಕ್ಕೆ ತಡೆಯೊಡ್ಡಿದ್ದಾರೆ , ಇದರಿಂದಾಗಿ ತುಂಬಾ ಬೇಸರವಾಗಿದೆ, ಅದರೂ ಎದೆಗುಂದದೆ ಇತರ ಸೇವಾ ಕಾರ್ಯಗಳನ್ನು ಮುನ್ನೆಡೆಸಿಕೊಂಡು ಹೋಗುತೇವೆ, ಜನರ ಬೆಂಬಲ ಆಶೀರ್ವಾದ ನಮಗಿದೆ, ನಮ್ಮದು ರಾಜಕೀಯೇತರ ಸಂಸ್ಥೆಯಾಗಿದ್ದು ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುವುದಾಗಿ ಬಿ.ಕೆ. ಮುನಿಸ್ವಾಮಿ ತಿಳಿಸಿದರು 

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು