ಬಿ.ಆರ್.ಟಿ: ಸೋಲಿಗರಿಗೆ ನೆರವಾದ ನರೇಗಾ.

ಬಿ.ಆರ್.ಟಿ: ಸೋಲಿಗರಿಗೆ ನೆರವಾದ ನರೇಗಾ.
ಬಿ.ಆರ್.ಟಿ: ಸೋಲಿಗರಿಗೆ ನೆರವಾದ ನರೇಗಾ.
   
ಯಳಂದೂರು.ಜೂ.26.ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ ಈ ಬಾರಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯನ್ನು ಬಳಸಲಾಗುತ್ತಿದೆ.
ನರೇಗಾ ಅಡಿಯಲ್ಲಿ ಕೆರೆ ಅಭಿವೃದ್ಧಿ ಗೊಳಿಸಲಾಗುತ್ತಿದ್ದು.ಬಿಆರ್‌ಟಿಯ ಪ್ರದೇಶದಲ್ಲಿ ಕೆರೆಯಲ್ಲಿ ಮಣ್ಣು ತೆಗೆದು ಬದಿಯಲ್ಲಿ ಹಾಕಲಾಗುತ್ತಿದ್ದು.  ಬಿಳಿಗಿರಿ ರಂಗನ ಬೆಟ್ಟದಲ್ಲಿ ನರೇಗಾ ಕೂಲಿ ಕಾರ್ಮಿಕರು ಬೆಂಗಳೂರು, ಮೈಸೂರ್ ಗಳಲ್ಲಿ ಡ್ರೈವರ್ ಗಳಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು.ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಹಾಡಿಗೆ ಬಂದು ಕೆಲಸವಿಲ್ಲದೆ ಇದ್ದರಿಂದ ಗ್ರಾಮ ಪಂಚಾಯತಿ ವತಿಯಿಂದ ಅಧ್ಯಕ್ಷರು ಹಾಗು ಸದಸ್ಯರು ಸೇರಿ ಸೋಲಿಗರಿಗೆ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ನೀಡಿ ಕೋವಿಡ್ ಸಂದರ್ಭದಲ್ಲಿ ಹಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ.ಈ ವರ್ಷ ನರೇಗಾ ಅಡಿಯಲ್ಲಿ ಸೋಲಿಗರು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೆರೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗಿದೆ.ಸದ್ಯ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಬೀದಿಕೆರೆ, ಕೆಣ್‌ಕೆರೆ, ಸೋಮೇಶ್ವರ ಕೆರೆ, ಶೆಟ್ರಕಟ್ಟೆ ಪ್ರದೇಶದಲ್ಲಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಕಡೆಗಳಲ್ಲೂ ಶೀಘ್ರವಾಗಿ ಆರಂಭವಾಗಲಿದೆ ಎಂದು ಪಿಡಿಓ ಸ್ವಾಮಿ ರವರು ತಿಳಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷೆ ರಂಗಮ್ಮ,ಸದಸ್ಯರಾದ ವೆಂಕಟೇಶ್,ಪ್ರತೀಪ್ ಕುಮಾರ್,ಸಾಕಮ್ಮ.ಮಾದಮ್ಮ.ಕೂಲಿ ಕಾರ್ಮಿಕರಾದ ಗಿರಿ ಮಾದೇಗೌಡ, ಮಾದೇಗೌಡ, ಬಸವರಾಜು,ನಾಗರಾಜು ಹಾಜರಿದ್ದರು.
ವರದಿ.ಅನಿಲ್ ಕುಮಾರ್. ಗೂಳಿಪುರ