SSLC ಪರೀಕ್ಷೆಗೆ ತಡೆ ಕೋರಿದ್ದ ಅರ್ಜಿ ಇತ್ಯರ್ಥ. ಸರ್ಕಾರಕ್ಕೆ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲು ಹೈ ಕೋರ್ಟ್ ಸೂಚನೆ

SSLC ಪರೀಕ್ಷೆಗೆ ತಡೆ ಕೋರಿದ್ದ ಅರ್ಜಿ ಇತ್ಯರ್ಥ. ಸರ್ಕಾರಕ್ಕೆ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ  ನಡೆಸಲು ಹೈ ಕೋರ್ಟ್ ಸೂಚನೆ

ಬೆಂಗಳೂರು : ಕೊರೊನಾ ಹಿನ್ನಲೆ ರಾಜ್ಯದಲ್ಲಿ SSLC ಪರೀಕ್ಷೆ ನಡೆಸಲು ತಡೆ ನೀಡಬೇಕು ಎಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು  ಹೈ ಕೋರ್ಟ್ ಪೀಠ ಇತ್ಯರ್ಥ ಪಡಿಸಿದೆ.. ಸರ್ಕಾರದಿಂದ ಪರೀಕ್ಷೆ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ ಸರ್ಕಾರ ಎಸ್ ಓಪಿ ಸಲ್ಲಿಕೆ ಮಾಡಿದೆ. ಇದನ್ನು ಪುರಸ್ಕರಿಸಿದ ಹೈಕೋರ್ಟ್ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ  ನಡೆಸಲು ನ್ಯಾಯಮೂರ್ತಿಗಳು ಸೂಚನೆ ನೀಡಿದೆ. ರಾಜ್ಯದಲ್ಲಿ ಕರೋನಾ ವೈರಸ್ ಸೋಂಕು ದಿನೇ ದಿನೇ ಹರಡುತ್ತಿರುವ ಹಿನ್ನಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದಂತೆ ನಿರ್ದೇಶನ ಕೋರಿ ವಕೀಲ ಲೊಕೇಶ್ ಪಿಐಎಲ್  ಅರ್ಜಿ ಸಲ್ಲಿಸಿದ್ರು. ಅಲ್ಲದೇ ಅರ್ಜಿಯಲ್ಲಿ ರಾಜ್ಯದಲ್ಲಿ ಕರೋನಾ ವೈರಸ್ ವ್ಯಾಪಕವಾಗಿ ಹರಡ್ತಾ ಇರುವ ಟೈಂ ನಲ್ಲಿ ಪರೀಕ್ಷೆ ಸೂಕ್ತ ಅಲ್ಲ.ವೈರಸ್ ಸೋಂಕು ಮಕ್ಕಳಿಗೂ ಹರಡುವ ಸಾಧ್ಯತೆ ತುಂಬಾ ದಟ್ಟವಾಗಿದೆ .ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ರು. ಈ ಹಿಂದೆ‌ ಸರ್ಕಾರಕ್ಕೆ ನೊಟೀಸ್ ನೀಡಿ ಇಂದಿಗೆ ವಿಚಾರಣೆ ಮುಂದೂಡಿಕೆ ಮಾಡಿತ್ತು. ಇಂದು ವಿಚಾರಣೆ ನಡೆಸಿ ಪೀಠ ಸರ್ಕಾರದ ಮನವಿ ಪುರಸ್ಕರಿಸಿ ಅರ್ಜಿ ಇತ್ಯರ್ಥ ಪಡಿಸಿದೆ.